ದೊಡ್ಡ ವಾಹನ

V10ನಲ್ಲಿ 2512 mm x 1 603 mm (8.2 ಅಡಿ x 5.3 ಅಡಿ) ಲೋಡಿಂಗ್ ಏರಿಯಾ ಇದೆ. ಈ ದೊಡ್ಡ ಲೋಡಿಂಗ್ ಜಾಗವು ಸಾಧಾರಣವಾಗಿ ಭಾರವಾದ ಮತ್ತು ಹೆಚ್ಚು ಪ್ರಮಾಣದ ಭಾರಗಳನ್ನು ಹೊರಲು ಸೂಕ್ತವಾಗಿದೆ. 165 R 14 ಟೈರ್‌ಗಳು (14-ಇಂಚು ರೇಡಿಯಲ್ ಟೈರ್‌ಗಳು) ವಾಹನವನ್ನು ವೈವಿಧ್ಯಮಯ ಪ್ರದೇಶಗಳಲ್ಲಿ (ಕಚ್ಚಾ ಮತ್ತು ನಯವಾದ ರಸ್ತೆಗಳು) ಚಲಾಯಿಸಬಹುದು ಎಂಬ ಖಾತರಿ ಕೊಡುತ್ತದೆ.

ದೊಡ್ಡ ವಾಹನ ದೊಡ್ಡ ವಾಹನ

ಶಕ್ತಿ ಅಧಿಕ

ಇಂಟ್ರಾ V10ನಲ್ಲಿ 2 ಸಿಲಿಂಡರ್ 798cc DI ಇಂಜಿನ್ ಇದ್ದು, 33 kW (44 HP) @ 3 750 r /ನಿಮಿಷ ಶಕ್ತಿ ಮತ್ತು 110 Nm @ 1750 - 2500 r /ನಿಮಿಷ ಟಾರ್ಕ್ ನೀಡುತ್ತದೆ. ಚಾಸಿ ಫ್ರೇಮ್ ಅನ್ನು ಹೈಡ್ರೋಫಾರ್ಮಿಂಗ್ ವಿಧಾನದಲ್ಲಿ ತಯಾರಿಸಲಾಗಿದೆ. ಚಾಸಿಯಲ್ಲಿ ಕಡಿಮೆ ವೆಲ್ಡಿಂಗ್ ಜಾಯಿಂಟ್‌ಗಳು ಇವೆ ಎಂದರೆ ಅಧಿಕ ರಚನಾತ್ಮಕ ಸಾಮರ್ಥ್ಯವಿರುತ್ತದೆ, ಹೆಚ್ಚು ಬಾಳಿಕೆ ಬರುತ್ತದೆ ಮತ್ತು ಕಡಿಮೆ NVH ಮಟ್ಟಗಳಿರುತ್ತವೆ.

ಶಕ್ತಿ ಅಧಿಕ ಶಕ್ತಿ ಅಧಿಕ

ಅತ್ಯುತ್ತಮ ಕಾರ್ಯಕ್ಷಮತೆ

ಇಂಟ್ರಾ V10ನಲ್ಲಿ ಲೀಫ್ ಸ್ಪ್ರಿಂಗ್ ಸಸ್ಪೆನ್ಷನ್ (ಮುಂಬದಿಯಲ್ಲಿ 6 ಲೀವ್‌ಗಳು, ಹಿಂಬದಿಯಲ್ಲಿ 7 ಲೀವ್‌ಗಳು) ಇದೆ. ಬಲಿಷ್ಠ ಲೀಫ್ ಸ್ಪ್ರಿಂಗ್ ಸಸ್ಪೆನ್ಷನ್ ವಾಹನದ ಭಾರ ಹೊರುವ ಸಾಮರ್ಥ್ಯವನ್ನು ಸುಧಾರಿಸುತ್ತದೆ. 175mm ರಷ್ಟು ಗ್ರೌಂಡ್ ಕ್ಲಿಯರೆನ್ಸ್ ದುರ್ಬಲ ರಸ್ತೆ ಸ್ಥಿತಿಗಳಲ್ಲೂ ಕಾರ್ಯನಿರ್ವಹಣಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ದರ್ಜೆಯಲ್ಲೇ ಅತ್ಯುತ್ತಮವಾದ 43% ಗ್ರೇಡೇಬಿಲಿಟಿ ಘಾಟಿಯ ರಸ್ತೆಗಳು ಮತ್ತು ಮೇಲ್ಸೇತುವೆಗಳ ಮೇಲೆ ಸರಳವಾಗಿ ಭಾರ ಹೊತ್ತ ಸ್ಥಿತಿಯಲ್ಲಿ ಚಲಾಯಿಸಲು ನೆರವಾಗುತ್ತವೆ.

ಅತ್ಯುತ್ತಮ ಕಾರ್ಯಕ್ಷಮತೆ ಅತ್ಯುತ್ತಮ ಕಾರ್ಯಕ್ಷಮತೆ

ಅತ್ಯುತ್ತಮ ಆರಾಮ

ಇಂಟ್ರಾ V10ನಲ್ಲಿ ಹೊಸ ತಲೆಮಾರಿನ, ದೊಡ್ಡ ಮತ್ತು ಅಗಲವಾದ ನಡೆದು ಸಾಗಬಹುದಾದ ಕ್ಯಾಬಿನ್ D+2 ಸೀಟಿಂಗ್ ವ್ಯವಸ್ಥೆಯಲ್ಲಿದೆ. ಡ್ಯಾಷ್‌ಬೋರ್ಡಿಗೆ ಜೋಡಿಸಲಾದ ಗೇರ್ ಲಿವರ್ ಮತ್ತು ಆರಾಮದಾಯಕ ಸೀಟ್‌ಗಳು ಆರಾಮದಾಯಕ ಚಾಲನಾ ಅನುಭವವನ್ನು ಕೊಡುವುದು ಮಾತ್ರವಲ್ಲದೆ, ಉತ್ತಮ ವಿರಾಮದ ಅನುಭವವನ್ನೂ ಕೊಡುತ್ತದೆ. ಎಲೆಕ್ಟ್ರಿಕ್ ಪವರ್ ಅಸಿಸ್ಟೆಡ್ ಸ್ಟೀರಿಂಗ್‌ನಿಂದಾಗಿ ಚಾಲನೆಗೆ ಹಾಕುವ ಪ್ರಯತ್ನ ಸರಾಗವಾಗುವ ಮೂಲಕ ಸಾರಿಗೆ ಜಂಜಡವಿರುವ ಸ್ಥಿತಿಗಳಲ್ಲಿ ಚಾಲನೆ ಸುಲಭವಾಗುತ್ತದೆ. ಸಣ್ಣ ಟರ್ನಿಂಗ್ ಸರ್ಕಲ್ ರೇಡಿಯಸ್ 4.75 mm ನಿಂದಾಗಿ ತೀಕ್ಷ್ಣವಾದ ತಿರುವು ತೆಗೆದುಕೊಳ್ಳುವುದು ಅಥವಾ ಕಡಿಮೆ ಜಾಗವಿರುವಲ್ಲಿ ವಾಹನವನ್ನು ಪಾರ್ಕ್ ಮಾಡುವಾಗ ಹೆಚ್ಚು ಚಾಲನಾ ಆರಾಮ ಸಿಗುತ್ತದೆ. ಎಲ್ಲಾ ನಿಯಂತ್ರಣಗಳು, ಪೆಡಲ್‌ಗಳು ಮತ್ತು ಲಿವರ್‌ಗಳನ್ನು ಚಾಲಕರಿಗೆ ಸುಲಭವಾಗಿ ಸಿಗುವ ರೀತಿಯಲ್ಲಿ ಇಡಲಾಗಿದ್ದು, ಅದರಿಂದ ನಗರದ ಸಾರಿಗೆ ಜಂಜಡದಲ್ಲಿ ಅಥವಾ ಧೀರ್ಘ ದೂರದ ಪ್ರಯಾಣದಲ್ಲಿ ಸಮಾನ ಸಂತೃಪ್ತ ಚಾಲನೆಯ ಖಾತರಿ ಸಿಗುತ್ತದೆ.

ಅತ್ಯುತ್ತಮ ಆರಾಮ ಅತ್ಯುತ್ತಮ ಆರಾಮ

ಉಳಿತಾಯ ಅತ್ಯಧಿಕ

ಇಂಟ್ರಾ V10ನಲ್ಲಿ ಗೇರ್ ಶಿಫ್ಟ್ ಅಡ್ವೈಸರ್ (GSA) ಮತ್ತು ಈಕೋ ಸ್ವಿಚ್ ಎರಡೂ ಇದೆ. GSAಯು ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ನಲ್ಲಿ ಗೇರ್‌ಗಳನ್ನು ಬದಲಾಯಿಸಲು (ಬಾಣ ಗುರುತು ಬಳಸಿ) ಅತ್ಯುನ್ನತ ಪಾಯಿಂಟ್‌ಗಳನ್ನು ಸೂಚಿಸುತ್ತದೆ. ವಾಹನದಲ್ಲಿ ಎರಡು ಚಾಲನಾ ಮೋಡ್‌ಗಳಿವೆ: ಇಸಿಒ ಮತ್ತು ಸಾಮಾನ್ಯ. ಚಾಲಕನು ಉತ್ತಮ ಇಂಧನ ಕ್ಷಮತೆ ಪಡೆದುಕೊಳ್ಳಲು ಇಸಿಒ ಮೋಡ್‌ಗೆ ಡ್ಯಾಷ್‌ಬೋರ್ಡ್‌ನಲ್ಲಿರುವ ಬಟನ್ ಮೂಲಕ ಬದಲಾಗಬಹುದು. ಸಾಮಾನ್ಯ ಮೋಡ್‌ ಅನ್ನು ತೀಕ್ಷ್ಣವಾದ ಗ್ರೇಡಿಯಂಟ್‌ಗಳು, ಭಾರ ಅತಿಯಾಗಿದ್ದ ಸ್ಥಿತಿಗಳು, ಆಗಾಗ್ಗೆ ಬ್ರೇಕ್ ಹಾಕಬೇಕಾದಾಗ/ ನಗರ ಸಾರಿಗೆ ಇತ್ಯಾದಿಯಲ್ಲಿ ಬಳಸಬಹುದು. ಈ ಗುಣಲಕ್ಷಣಗಳ ಬಳಕೆಯು ಗ್ರಾಹಕರಿಗೆ ದರ್ಜೆಯಲ್ಲಿಯೇ ಅತ್ಯುತ್ತಮ ಇಂಧನ ಕ್ಷಮತೆಯನ್ನು ಒದಗಿಸುತ್ತದೆ. ಕಡಿಮೆ ನಿರ್ವಹಣಾ ವೆಚ್ಚದ ಜೊತೆಗೆ ಸಾಮಗ್ರಿಗಳ ಬಳಕೆಯು ಧೀರ್ಘಕಾಲ ಬಾಳಿಕೆ ಬರುವ ಮೂಲಕ ಮಾಲೀಕರಿಗೆ ಹೆಚ್ಚಿನ ಉಳಿತಾಯವಾಗುತ್ತದೆ.

ಉಳಿತಾಯ ಅತ್ಯಧಿಕ ಉಳಿತಾಯ ಅತ್ಯಧಿಕ

ಲಾಭವೂ ಅತ್ಯಧಿಕ

V10 ಅನ್ನು ಸಾಧಾರಣ ಲೋಡ್ ಮತ್ತು ಲೀಡ್ ಅಪ್ಲಿಕೇಶನ್‌ಗಳಲ್ಲಿ ನಿಯೋಜಿಸಬಹುದಾಗಿದ್ದು, ಗ್ರಾಹಕರಿಗೆ ಹೆಚ್ಚಿನ ಲಾಭದ ಖಾತರಿ ಒದಗಿಸುತ್ತದೆ. ಕಾಂಪಾಕ್ಟ್ ಫೂಟ್ ಪ್ರಿಂಟ್ ಮತ್ತು ಒಂದು ಸಣ್ಣ TCR ನಿಂದಾಗಿ V10 ಚಾಲನೆಯು ನಗರಗಳ ಕಿರಿದಾದ ಪಾರ್ಕಿಂಗ್ ಜಾಗಗಳಲ್ಲಿ ಪಾರ್ಕಿಂಗ್ ಮತ್ತು ವಾಣಿಜ್ಯ ಸ್ಥಳಗಳಲ್ಲಿ ನಿಲುಗಡೆ ಸುಲಭವಾಗಿಸುತ್ತದೆ. V10ನ ಟರ್ನ್‌ ಅರೌಂಡ್ ಸಮಯವು ಹೆಚ್ಚು ಉತ್ತಮವಾಗಿದೆ ಮತ್ತು ಹೀಗಾಗಿ ಹೆಚ್ಚಿನ ಸಂಖ್ಯೆಯ ಪ್ರವಾಸಗಳನ್ನು ಮಾಡಿ ಮಾಲೀಕರಿಗೆ ಹೆಚ್ಚು ಆದಾಯ & ಲಾಭಗಳಿಸಲು ಸಾಧ್ಯವಾಗುತ್ತದೆ.

ಲಾಭವೂ ಅತ್ಯಧಿಕ ಲಾಭವೂ ಅತ್ಯಧಿಕ

ಟಾಟಾ ಲಾಭ

ಸಾಮಾನ್ಯ ವಾರಂಟಿಯಾಗಿ 2 ವರ್ಷಗಳು ಅಥವಾ 72,000 ಕಿಮೀಗಳು ಇದ್ದು, 24-ಗಂಟೆ ಚಾಲ್ತಿಯಲ್ಲಿರುವ ಉಚಿತ ಸಹಾಯವಾಣಿ ಸಂಖ್ಯೆ (1800 209 7979) ಯಾವುದೇ ತುರ್ತು ಸಂದರ್ಭದಲ್ಲಿ ನೆರವು ನೀಡುತ್ತದೆ, ಮತ್ತು ಟಾಟಾ ಸಮರ್ಥ್ & ಸಂಪೂರ್ಣ ಸೇವಾ ಪ್ಯಾಕೇಜ್‌ ಖಾತರಿಯನ್ನು ನೀಡುವುದರೊಂದಿಗೆ ಸಂಪೂರ್ಣ ಮನಶ್ಶಾಂತಿ ಕೊಡುತ್ತದೆ.

ಟಾಟಾ ಲಾಭ ಟಾಟಾ ಲಾಭ