ವಾಣಿಜ್ಯ ವಾಹನಗಳಿಗೆ ನೋಟದಲ್ಲಿ ಸಮೃದ್ಧತೆಯ ಅಂದವನ್ನು ಹೊಂದಿರುವ ಮತ್ತು ದೈತ್ಯ ಮತ್ತು ನಂಬಿಕಾರ್ಹತೆ ಇರುವ ಅತ್ಯಾಧುನಿಕ ನಿರ್ಮಾಣವಿರುವ TML ನ ಹೊಸ ‘ಪ್ರೀಮಿಯಂ ಟಫ್‌’ ವಿನ್ಯಾಸದ ತತ್ವದ ಜೊತೆಗೆ ಟಾಟಾ ಇಂಟ್ರಾ ಸಣ್ಣ ಟ್ರಕ್‌ಗಳ ಶ್ರೇಣಿಯಲ್ಲಿ ನಿರ್ಮಿಸಲಾಗಿದೆ.

ಇಂಟ್ರಾ V10 ಅನ್ನು ಸಾಧಾರಣ ಲೋಡ್ ಮತ್ತು ಸಾಧಾರಣ ಲೀಡ್ ಅಪ್ಲಿಕೇಶನ್‌ಗಳಿಗೆ ತಮ್ಮ ವಾಹನಗಳನ್ನು ಬಳಸುವ ಗ್ರಾಹಕರಿಗಾಗಿ ನಿರ್ಮಿಸಲಾಗಿದೆ ಇಂಟ್ರಾ V10ನಲ್ಲಿ ಹೊಸ BSVI ಕಾಂಪ್ಲಿಯಮಟ್ ಡಿಐ ಎಂಜಿನ್ ಇದ್ದು, 33 kW (44 HP) ಶಕ್ತಿ ಮತ್ತು 110 Nm ಟಾರ್ಕ್ ಅನ್ನು ದರ್ಜೆಯಲ್ಲೇ ಅತ್ಯುತ್ತಮ 43% ಗ್ರೇಡೇಬಿಲಿಟಿಯಲ್ಲಿ ಹೊಂದಿದೆ. ವಾಹನವು ಈಕೋ ಸ್ವಿಚ್ ಜೊತೆಗೆ ಗೇರ್ ಶಿಫ್ಟ್ ಅಡ್ವೈಸರ್ (GSA) ಅನ್ನೂ ಹೊಂದಿದ್ದು, ಗ್ರಾಹಕರು ದರ್ಜೆಯಲ್ಲೇ ಅತ್ಯುತ್ತಮ ಇಂಧನ ಕ್ಷಮತೆ ಪಡೆಯುವುದನ್ನು ಖಚಿತಪಡಿಸುತ್ತದೆ.

ಎಲೆಕ್ಟ್ರಿಕ್ ಪವರ್ ಎಸಿಸ್ಟಡ್ ಸ್ಟೀರಿಂಗ್ (EPAS) ನಿಂದಾಗಿ ಸ್ಟೀರಿಂಗ್ ಮೇಲೆ ಹಾಕಬೇಕಾದ ಶ್ರಮ ಕಡಿಮೆಯಾಗುವುದಷ್ಟೇ ಅಲ್ಲದೆ, ವಾಹನದ ಚಾಲನೆಯನ್ನು ಹೆಚ್ಚು ಸರಳಗೊಳಿಸುತ್ತದೆ. ಒಂದು 4.75 m TCR ಮತ್ತು ಕಾಂಪಾಕ್ಟ್‌ ಫೂಟ್‌ಪ್ರಿಂಟ್ ಅತೀ ಸಾರಿಗೆ ಜಂಜಡವಿರುವ ನಗರದ ರಸ್ತೆಗಳಲ್ಲೂ ಸರಳವಾಗಿ ಹಾಕಬಹುದಾದಂತೆ ಇದೆ.

ಚಾಸಿ ಫ್ರೇಮ್ ಅನ್ನು ಹೈಡ್ರೋ ಫಾರ್ಮಿಂಗ್ ವಿಧಾನ ಮತ್ತು ಅತ್ಯಾಧುನಿಕ ರೋಬೋಟಿಕ್ ಸೌಲಭ್ಯಗಳಿಂದ ಅತ್ಯುತ್ತಮ ಗುಣಮಟ್ಟ ಮತ್ತು ಗಟ್ಟಿಮುಟ್ಟಾಗಿ ತಯಾರಿಸಲಾಗಿದೆ. ಚಾಸಿ ಮೇಲೆ ಕೆಲವೇ ವೆಲ್ಡಿಂಗ್ ಜಾಯಿಂಟ್‌ಗಳು ಇರುವುದು ಎಂದರೆ, ಅಧಿಕ ರಚನಾತ್ಮಕ ಬಲ, ಹೆಚ್ಚು ಬಾಳಿಕೆ ಮತ್ತು ಕಡಿಮೆ ಎನ್‌ವಿಎಚ್ ಮಟ್ಟಗಳಿರುತ್ತವೆ.

V10 ತನ್ನ ದೊಡ್ಡ ಲೋಡಿಂಗ್ ಏರಿಯಾವಾದ 2512 mm x 1603 mm (8.2 ಅಡಿ x 5.3 ಅಡಿ), ಮುಂಬದಿ & ಹಿಂಬದಿ ರಿಜಿಡ್ ಆಕ್ಸಲ್‌ನೊಂದಿಗೆ ಲೀಫ್ ಸ್ಪ್ರಿಂಗ್‌ಗಳ ಜೊತೆಗೆ ಸುಧಾರಿತ ಭಾರ ಹೊರುವ ಸಾಮರ್ಥ್ಯವನ್ನು ಖಚಿತಪಡಿಸಿ ಮಾಲೀಕರಿಗೆ ಲಾಭಗಳು ಮತ್ತು ಉಳಿತಾಯಗಳನ್ನು ಕೊಡುತ್ತದೆ.

ಕರಪತ್ರ ಡೌನ್‌ಲೋಡ್ ಮಾಡಿ

ಎಕ್ಸ್ ಶೋರೂಂ ಬೆಲೆ*

* ತೋರಿಸಿರುವ ಬೆಲೆಗಳು ಸೂಚಕ ಮತ್ತು ಬದಲಾವಣೆಗೆ ಒಳಪಟ್ಟಿರುತ್ತವೆ